ಅಭಿಪ್ರಾಯ / ಸಲಹೆಗಳು

ರಾಷ್ಟ್ರೀಯ ಕನ್ನಡ ಸಂಶೋಧನಾ ಕಮ್ಮಟಕ್ಕೆ ಮರು ಅರ್ಜಿ ಆಹ್ವಾನ

ಕರ್ನಾಟಕ ಸಾಹಿತ್ಯ ಅಕಾಡೆಮಿಯು ದಿನಾಂಕ:18.07.2022 ರಿಂದ  ದಿನಾಂಕ:22.07.2022ರ ವರೆಗೆ ಸೋಂದಾ, ಉತ್ತರ ಕನ್ನಡ ಜಿಲ್ಲೆ ಇಲ್ಲಿ ಐದು ದಿನಗಳ ಕಾಲ “ರಾಷ್ಟ್ರೀಯ ಕನ್ನಡ ಸಂಶೋಧನಾ ಕಮ್ಮಟ” ವನ್ನು ನಡೆಸಲು ಉದ್ದೇಶಿಸಿದ್ದು, ಶಿಬಿರಾರ್ಥಿಯಾಗಿ ಭಾಗವಹಿಸುವವರಿಗೆ ಅರ್ಜಿಗಳನ್ನು ಹಾಗೂ ಕಮ್ಮಟದಲ್ಲಿ ಪ್ರಬಂಧಗಳನ್ನು ಮಂಡಿಸುವವರಿಗೆ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.

ಪ್ರಬಂಧಗಳನ್ನು ಮಂಡಿಸದೆ ಶಿಬಿರಾರ್ಥಿಯಾಗಿ ಭಾಗವಹಿಸುವವರು ಅರ್ಜಿಗಳನ್ನು ಅಕಾಡೆಮಿಯ ವೆಬ್‌ಸೈಟ್‌ನಿಂದ ಪಡೆದು ಸಲ್ಲಿಸುವುದು ಹಾಗೂ ಪ್ರಬಂಧ ಮಂಡಿಸುವವರು ನೀಡಿರುವ ಪಠ್ಯಕ್ರಮದ ಆಧಾರದ ಮೇಲೆ ತಾವು ಮಂಡಿಸುವ ಪ್ರಬಂಧಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಅರ್ಜಿಗಳನ್ನು ಹಾಗೂ ಪ್ರಬಂಧಗಳನ್ನು ಸಲ್ಲಿಸುವವರು ಕೊನೆಯ ದಿನಾಂಕ:08.07.2022ರೊಳಗೆ ಅಕಾಡೆಮಿಗೆ ರಿಜಿಸ್ಟರ್ ಅಂಚೆ ಅಥವಾ ಕೊರಿಯರ್ ಮೂಲಕ ನಿಬಂಧನೆಗೊಳಪಟ್ಟು ಅರ್ಜಿಗಳನ್ನು ಹಾಗೂ ಅರ್ಜಿಯೊಂದಿಗೆ ಪ್ರಬಂಧಗಳನ್ನು ಸಲ್ಲಿಸಲು ಕೋರಿದೆ.

 ಈಗಾಗಲೇ ಪ್ರಬಂಧಗಳನ್ನು ಸಲ್ಲಿಸಿ ಆಯ್ಕೆಯಾದವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ

ರಿಜಿಸ್ಟ್ರಾರ್ 

ಕರ್ನಾಟಕ ಸಾಹಿತ್ಯಅಕಾಡೆಮಿ, 

ಎರಡನೇ ಮಹಡಿ, ಕನ್ನಡ ಭವನ, 

ಜೆ.ಸಿ.ರಸ್ತೆ, ಬೆಂಗಳೂರು-560 002. 

ದೂ: 080-22211730 / 22106460/ 29601730

ಅರ್ಜಿಸಲ್ಲಿಸಲು ನಿಯಮಗಳು 

 1. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ವಿಮರ್ಶೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 
 1. ಈಗಾಗಲೇ ಕನ್ನಡದ ನಿಯತಕಾಲಿಕೆಗಳು/ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ ಸಂಶೋಧಕರಿಗೆ ಆದ್ಯತೆ ನೀಡಲಾಗುವುದು. 
 1. ಈಗಾಗಲೇ ನಿಯತಕಾಲಿಕೆಗಳು/ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿರುವ ಸಂಶೋಧಕರು ಕನಿಷ್ಠ ಒಂದು ಲೇಖನವನ್ನಾದರೂ ಅರ್ಜಿಯೊಂದಿಗೆ ಸಲ್ಲಿಸಬೇಕು. 
 1. ಕಮ್ಮಟದಲ್ಲಿ ಭಾಗವಹಿಸುವ ಸಂಶೋಧನಾರ್ಥಿಗಳು ಈ ಮೇಲ್ಕಂಡ ಪರಿವಿಡಿಯ ಆಧಾರದ ಮೇಲೆ ಐದು ಪುಟಗಳ ಮಿತಿಯಲ್ಲಿ ಒಂದು ಸಂಶೋಧನಾ ಪ್ರಬಂಧವನ್ನು ಬರೆದು ಅರ್ಜಿಯೊಂದಿಗೆ ಕಳುಹಿಸಿಕೊಡಬೇಕು. ಅದರ ಸಾಫ್ಟ್ ಕಾಪಿಯನ್ನು sahithyaacademy.prakatane@gmail.com ಗೆ ಕಳುಹಿಸಬೇಕು. 
 1. ನಿಯತಕಾಲಿಕೆಗಳಲ್ಲಿ/ ಪತ್ರಿಕೆಗಳಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧ ಅಥವಾ ಕಮ್ಮಟದಲ್ಲಿ ಮಂಡಿಸುವ ಪ್ರಬಂಧದ ಗುಣಮಟ್ಟದ ಆಧಾರದ ಮೇಲೆ ಕಮ್ಮಟಕ್ಕೆ ಶಿಬಿರಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. 
 1. ಕಮ್ಮಟದಲ್ಲಿ ಮಂಡಿಸಲು ಆಯ್ಕೆಯಾದ ಪ್ರಬಂಧಗಳನ್ನು ಸಂಪಾದಿಸಿ ISBN ಸಂಖ್ಯೆಯೊಂದಿಗೆ ಪ್ರಕಟಿಸಲಾಗುವುದು. 
 1. ಪ್ರಕಟಿತ ಪ್ರಬಂಧಗಳಿಗೆ ಯಾವುದೇ ಗೌರವ ಸಂಭಾವನೆ ನೀಡಲಾಗುವುದಿಲ್ಲ. 
 1. ಅಗತ್ಯವಿದ್ದಲ್ಲಿ ಸಂಶೋಧನಾರ್ಥಿಗಳು ಪ್ರಕಟಿತ ಕೃತಿಗಳನ್ನು ಕೊಂಡುಕೊಳ್ಳಬಹುದು. ಉಚಿತ ಪ್ರತಿಗಳನ್ನು ನೀಡಲಾಗುವುದಿಲ್ಲ. 
 1. 20 ರಿಂದ 50 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಬಹುದು. 
 1. ಕಮ್ಮಟವು 5 ದಿನಗಳ ಕಾಲ ನಡೆಯುವುದು. 

   

ರಾಷ್ಟ್ರೀಯ ಕನ್ನಡ ಸಂಶೋಧನಾ ಕಮ್ಮಟ 

ಈ ಕೆಳಕಂಡ ಪರಿವಿಡಿಯ ಆಧಾರದ ಮೇಲೆ ಪ್ರಬಂಧಗಳನ್ನು ಕಳುಹಿಸುವುದು 

 ಪರಿವಿಡಿ 

 1. ಕನ್ನಡ ಸಾಹಿತ್ಯ ಚರಿತ್ರೆ ಕ್ರಿ.ಶ.450ರಿಂದ ಇಂದಿನವರೆಗೆ 
 1. ಕಾವ್ಯ ಮೀಮಾಂಸೆ 
 1. ಸಾಹಿತ್ಯ ವಿಮರ್ಶೆ 
 1. ಭಾಷಾ ವಿಜ್ಞಾನ, ನಿಘಂಟು ರಚನೆ 
 1. ಛಂದಸ್ಸು 
 1. ಗ್ರಂಥ ಸಂಪಾದನೆ ಮತ್ತು ಹಸ್ತಪ್ರತಿ ಶಾಸ್ತ್ರ 
 1. ಸಂಶೋಧನೆ 
 2. ಜಾನಪದ
 3.  ಸಾಂಸ್ಕೃತಿಕ ಅಧ್ಯಯನ ಮತ್ತು ಕನ್ನಡ ಸಂಸ್ಕೃತಿ

 4.  ಭಾರತೀಯ/ ಪಾಶ್ಚಾತ್ಯ ಭಾಷೆ ಮತ್ತು ಸಾಹಿತ್ಯಗಳತೌಲನಿಕ ಅಧ್ಯಯನ

 5.   ಶಾಸನ ಸಾಹಿತ್ಯ

 6.  ಶಾಸ್ತ್ರ ಸಾಹಿತ್ಯ

 7.  ದಾಖಲು ಸಾಹಿತ್ಯ

 8.  ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಶಾಸನ, ವಿಮರ್ಶೆ, ಮೀಮಾಂಸೆಗಳಿಗೆ ಸಂಬಂಧಿಸಿದ ವಿನೂತನ ಸಂಶೋಧನೆ. 

ರಾಷ್ಟ್ರೀಯ ಕನ್ನಡ ಸಂಶೋಧನಾ ಕಮ್ಮಟಕ್ಕೆ ಮರು ಅರ್ಜಿ ಆಹ್ವಾನ → ಅರ್ಜಿ ನಮೂನೆ

ಇತ್ತೀಚಿನ ನವೀಕರಣ​ : 01-07-2022 03:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080